ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದಾಗ ನಡೆದ ಘಟನೆ. ಸಿಟಿ ಬಸ್ಸಿಗೆ ಕಾಯುತ್ತ ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಸಮೀಪವೇ ಇದ್ದ ಸಣ್ಣ ಮೈದಾನದಲ್ಲಿ ಮಕ್ಕಳ ಗುಂಪೊಂದು ಕ್ರಿಕೆಟ್ ಆಡುತ್ತಿತ್ತು. ಒಬ್ಬಾತ ಜೋರಾಗಿ ಹೊಡೆದಾಗ ಬಾಲು ಮೈದಾನವನ್ನು ದಾಟಿ ನನ್ನ ಪಕ್ಕ ನಿಂತಿದ್ದ ಯುವಕನ ಬಳಿ ಬಂದು ಬಿದ್ದಿತು. ಇದನ್ನು ನೋಡಿದ ಮಕ್ಕಳು ಬಾಲ್ ಪಡೆಯಲು ಓಡೋಡಿ ಬಂದವು.
ಅಷ್ಟರಲ್ಲಿ ನಾನು ಹತ್ತಬೇಕಿದ್ದ ಬಸ್ ಬಂದಿದ್ದರಿಂದ ನನ್ನ ಗಮನ ಅತ್ತಕಡೆ ಹರಿಯಿತು. ಸುಶಿಕ್ಷಿತನಂತೆ ಕಾಣುತ್ತಿದ್ದ ಆ ಯುವಕ ಅದಾಗಲೇ ಬಾಲ್ ಎತ್ತಿಕೊಂಡವನು ಮಕ್ಕಳಿಗೆ ಅದನ್ನು ಹಿಂದಿರುಗಿಸದೆ ಮುಷ್ಟಿಯಲ್ಲಿ ಹಿಡಿದುಕೊಂಡು ಬಸ್ಸೇರಿ ಕುಳಿತುಕೊಂಡಿದ್ದ. ಮಕ್ಕಳು ಬಸ್ ಬಳಿ ಬಂದು ಬಾಲ್ ನೀಡುವಂತೆ ಅಂಗಲಾಚತೊಡಗಿದರು. ಆದರೂ ಈತ ತನಗೇನೂ ಗೊತ್ತಿಲ್ಲವೆಂಬಂತೆ ಮಿಣ್ಣಗೆ ಕುಳಿತುಕೊಂಡಿದ್ದ. ಬಾಲ್ ಇವನ ಬಳಿಯೇ ಇದೆ ಎಂದು ಗೊತ್ತಾಗಿದ್ದ ಆ ಮಕ್ಕಳ ಮುಖ ಅಸಹಾಯಕತೆಯಿಂದ ಕ್ಷಣಕ್ಷಣಕ್ಕೂ ಸಣ್ಣದಾಗತೊಡಗಿತು.
ಇದನ್ನು ನೋಡಿದ ನಾವೆಲ್ಲ ಆ ಯುವಕನತ್ತ ಇರಿಯುವ ನೋಟ ಬೀರಿದರೂ ಆತನ ಆನೆ ಚರ್ಮಕ್ಕೆ ಅದು ನಾಟಲೇ ಇಲ್ಲ! ಬಸ್ಸಿನಲ್ಲಿದ್ದ ಹಿರಿಯರೊಬ್ಬರು ಮನಸ್ಸು ತಡೆಯಲಾರದೆ ‘ಪಾಪ ಆ ಮಕ್ಕಳ ಚೆಂಡನ್ನು ಯಾಕೆ ಕಿತ್ಕೋತೀರ್ರೀ; ವಾಪಸ್ ಕೊಡಿ.’ ಎಂದು ಹೇಳಿದರಾದರೂ ಆತ ಜಾಣ ಕಿವುಡನಂತೆ ಕಿಟಕಿಯತ್ತ ಮುಖ ಹೊರಳಿಸಿದ.
ಬಸ್ಸು ನಿಧಾನವಾಗಿ ಮುಂದೆ ಚಲಿಸಲಾರಂಭಿಸಿತು. ಮಕ್ಕಳು ಅಂಗಲಾಚುತ್ತಲೇ ಕೆಲ ಹೆಜ್ಜೆ ಹಿಂಬಾಲಿಸಿದರು. ಬಸ್ಸು ವೇಗ ಹೆಚ್ಚಿಸಿಕೊಂಡಂತೆ ನಿರಾಶೆಯ ನೋಟ ಬೀರುತ್ತ ಪೆಚ್ಚುಮೋರೆ ಹಾಕಿಕೊಂಡರು. ಯುವಕನ ಮುಖದಲ್ಲಿ ವಿಜಯ(?)ದ ವಿಕೃತ ಸಂತೋಷವೊಂದು ಹುಟ್ಟಿ ಮಾಯವಾಯಿತು.
ವಿದ್ಯಾವಂತರಾಗಿದ್ದೂ ಅಂಥ ಸಣ್ಣ ಮಕ್ಕಳು ಎಲ್ಲೆಲ್ಲಿಂದಲೋ ಪುಡಡಿಗಾಸು ಕಲೆ ಹಾಕಿ ಆಡಲು ಕೊಂಡುಕೊಂಡಿರುವ ಬಾಲನ್ನೇ ಕಿತ್ತುಕೊಳ್ಳುವ ಸಣ್ಣತನ ತೋರಿಸುವ ಇಂಥವರು ನಾಳೆ ತಮ್ಮ ಮಕ್ಕಳ ಬಾಲ್ಯವನ್ನು ಹೇಗೆ ಹಸನಾಗಿಸಿಯಾರು?
ಬುಧವಾರ, ಮಾರ್ಚ್ 25, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
10 ಕಾಮೆಂಟ್ಗಳು:
ಎಂಥೆಂತ ಜನಗಳು ಇರ್ತಾರೋ!
ನಮಸ್ತೆ,
ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/
ಇಂಥವರು ಎಲ್ಲೆಡೆ ಇರುತ್ತಾರೆ. ಮತ್ತೊಬ್ಬರ ಸಂಕಟದಲ್ಲಿ ಸಂತಸ ಕಾಣುವುದೇ ಇವರ ಗುರಿ. ವಿಕೃತ ಸಂತಸ
ನಿಮ್ಮ ಲೇಖನ ಚೆನ್ನಾಗಿದೆ. ನಿಜವಾಗಲೂ ಇಂತಹ ಜನರು ಇದ್ದರ ಅನ್ನಿಸಿಬಿಡ್ತು...!!
lekhana chennagide... nija naanu intha janarannu noodiddini..
ega ella haage sir. eneno oadkondu, noora entu degree maadkondirtaare. aadare common sense haagu manushatwa maatra irolla:)
ಜೀವನದಲ್ಲೇ ಕೆಲಸ ನೆ ಎಲ್ಲ ಅಂತ ತಿಳ್ಕೊಂಡು
ಬದುಕಿನಲ್ಲಿ ಆಟ ಗೊತ್ತಿಲ್ದೇನೆ ಇರೋವ್ರು ಎಲ್ಲ ಹೀಗೇನೆ ಇರ್ತಾರೆ
ಅವರಿಗೆ ಆಟ ಆಡೋದು ಅಂದ್ರೆ ಟೈಮ್ ವೇಸ್ಟ್ ಅನಿಸುತ್ತೆ
ನಿಜ ಹೇಳಿದ್ರಿ ನೀವು...ಇವು ವಿಕೃತ ಮನಸಿನ ಲಕ್ಷಣಗಳು...ಇಂತಹವರು ತಾವೂ ಸುಖಿಸುವುದಿಲ್ಲ ಇತರನನ್ನೂ ಸಂತೋಷವಾಗಿರಗೊಡುವುದಿಲ್ಲ....
ನಿಜ ಸರ್
ಬುದ್ದಿ ಬೆಳೆಯುತ್ತದೆಯೇ ಹೊರತು
ಮನಸ್ಸು ಬೆಳೆಯದು
ಆ ಹುಡುಗರ ತಂದೆ ತಾಯಿ ಅಕಸ್ಮಾತ್ ಮನೆಕಂದಾಯ ಸರಿಯಾಗಿ ಕಟ್ಟಿದ್ದರೆ ನೀವೇ ಪಂಚಾಯ್ತಿ ಮಾಡಿ ಬಾಲು ಕೊಡಿಸಬಹುದಿತ್ತಲ್ಲ!
ಕಾಮೆಂಟ್ ಪೋಸ್ಟ್ ಮಾಡಿ