ಹಾತ್ಮೀಯ ಕನ್ನಡ ಕುಲ ಬಾಂಧವರೆ,
ಮತ್ತೊಂದು ಹದ್ದೂರಿ ಕನ್ನಡ ರಾಜ್ಯೋತ್ಸವ ಇತಿಹಾಸದ ಪುಟ ಸೇರಿದೆ. ನವೆಂಬರ್ ಒಂದು ತೆರೆ ಮರೆಗೆ ಸಂದರೂ ಕನ್ನಡಮ್ಮನ ಕುಲಪುತ್ರರೆಂದು ಕರೆದುಕೊಳ್ಳುವ ತಥಾಕಥಿತ ಕನ್ನಡದ ಉಟ್ಟು ಓ(ಹಾ)ರಾಟಗಾರರಿಗೆ ತಿಂಗಳಿಡೀ ಬಿಡುವಿರದಷ್ಟು ಕನ್ನಡ ಕೆಲಸ. ಇಂತಹ ಸಂದರ್ಭದಲ್ಲಿ ಆ ಕನ್ನಡಮ್ಮನ ಗೋಳು ಯಾವ ದೇವರಿಗೆ ಕೇಳಿಸೀತು ಅಲ್ಲವೇ? ಈ ಸಿಡಿಲಬ್ಬರಗಳ ಮಧ್ಯೆಯೂ ನಮ್ಮ ಕನ್ನಡ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ನಾನು ಕ್ಲಿಕ್ಕಿಸಿದ ಈ ಛಾಯಾಚಿತ್ರಗಳೇ ಸಾಕ್ಷಿ.. ನೂರು ಪುಟಗಳಷ್ಟು ಬರಹ ಹೇಳುವುದನ್ನು ಒಂದು ಛಾಯಾಚಿತ್ರ ಹೇಳುತ್ತದೆ ಎಂಬುದು ಬಲ್ಲವರ ಮಾತು. ಹಾಗಾಗಿ ಈ ಚಿತ್ರಗಳ ಪೂರ್ವಾಪರಗಳ ಕುರಿತು ಏನೂ ಬರೆಯದೆ ಫೋಟೊ ಮಾತ್ರ ಅಪ್ಲೋಡ್ ಮಾಡಿದ್ದೇನೆ. ಮುಂದಿನದೆಲ್ಲಾ ನಿಮ್ಮ ಚಿತ್ತದೃಷ್ಠಿಗೆ ಬಿಟ್ಟಿದ್ದು....
ಝೈ ಕನ್ನಡಾಂಭೆ..!!!!