ಸೋಮವಾರ, ಡಿಸೆಂಬರ್ 15, 2008

ಹೀಗೊಂದು ಕಥಾ ಕಾಲಕ್ಷೇಪ

ಜನ - ಜಾತ್ರೆ

ದೊಂದು ಪ್ರಸಿದ್ಧ ಯಾತ್ರಾ ಕ್ಷೇತ್ರ. ಅಲ್ಲಿನ ಹಳೇ ಕಾಲದ ದೇಗುಲಕ್ಕೆ ನಿತ್ಯವೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಹಾಗಾಗಿಯೇ ದೇಗುಲದ ಸುತ್ತಮುತ್ತಲಿದ್ದ ಅಂಗಡಿಯವರು, ಬೀದಿ ವ್ಯಾಪಾರಿಗಳು ತುಸು ಕಾಸು ಕಾಣುವಂತಾಗಿದ್ದರು. ಜಾತ್ರೆ, ಉತ್ಸವಗಳ ಸಮಯದಲ್ಲಿ ಪ್ರವಾಸಿಗರು ಹೆಚ್ಚಿರುತ್ತಿದ್ದುದರಿಂದ ವ್ಯಾಪಾರಿಗಳಿಗೂ ಅದು ಸುಗ್ಗಿ ಕಾಲ.

ಹುಡುಗ ನಿತ್ಯ ಅದೇ ಬೀದಿಯಲ್ಲಿ ನಿಂತು ಮಿರಮಿರನೆ ಹೊಳೆಯುವ ರೇಡಿಯಂ ಬಾಲುಗಳನ್ನು ಮಾರುತ್ತಿದ್ದ. 'ಅದೇನು ಈ ವಯಸ್ಸಿನಲ್ಲಿ ದುಡಿಮೆಯೇ!?' ಎಂದು ನೀವಂದುಕೊಳ್ಳಬಹುದು. ವಾಸ್ತವದ ನೆಲೆಯಲ್ಲಿ ನೋಡುವುದಾದರೆ; ಚಿಕ್ಕಾಸು ದುಡಿಯದೆ ಕುಡಿದು ಕುಡಿದೇ ಸತ್ತುಹೋದ ತಂದೆ, ವೃದ್ಧ ತಾಯಿ, ಸಣ್ಣ ತಂಗಿಯರು - ಇವೆಲ್ಲ ಅವನ ಬಾಲ್ಯವೆಂಬ ಬಣ್ಣದ ಪೆಟ್ಟಿಗೆಗೆ ಬೀಗ ಜಡಿದು ಬದುಕಿನ ಭಾರಕ್ಕೆ ಅವನನ್ನು ನೊಗವಾಗಿಸಿದ್ದವು. ಅತೀತಕ್ಕೆ ಆತು ಹೇಳುವುದಾದರೆ; ಅವನ ಪೂರ್ವಾರ್ಜಿತ ಕರ್ಮ ಅವನನ್ನು ಈ ಸ್ಥಿತಿಗೆ ತಂದಿತ್ತು.


ಸ್ಥಿತಿಯ ಬಗ್ಗೆ ಅವನಿಗೆ ಕೊರಗು, ಸ್ವಾನುಕಂಪಗಳಿರಲಿಲ್ಲ! ಸದಾ ನಗು ಸೂಸುವ ಮುದ್ದು ಮುಖ, ಗುಳಿ ಬೀಳುವ ಕೆನ್ನೆಗಳು, ಗಿರಾಕಿಗಳೊಂದಿಗೂ ಹಸನ್ಮುಖಿಯಾಗಿಯೇ ವ್ಯವಹರಿಸುತ್ತಿದ್ದ. ಬಂದ ಹಣವನ್ನು ಮಾಲೀಕನಿಗೆ ನೀಡಿ, ತನ್ನ ಕಮೀಷನ್ ಪಡೆದು ತೃಪ್ತಿಯಿಂದ ಮನೆಗೆ ತೆರಳುತ್ತಿದ್ದ.


ಅಂದು ದೇಗುಲದಲ್ಲಿ ಜಾತ್ರೆ. ಹುಡುಗನಿಗೂ ವ್ಯಾಪಾರ ಜೋರಾಗಿಯೇ ಇತ್ತು. ಸಂಜೆಯಾಗುತ್ತಿದ್ದಂತೆ ಉಕ್ಕಿ ಬರತೊಡಗಿದ ಜನಪ್ರವಾಹದಿಂದ ಜಾತ್ರೆ ರಂಗೇರತೊಡಗಿತು. ಹುಡುಗನೂ ತನ್ನಲ್ಲುಳಿದಿದ್ದ ಕೆಲವೇ ಬಾಲುಗಳನ್ನು ಮಾರಿ ಮನೆಗೆ ತೆರಳಲು ಉತ್ಸುಕನಾಗಿದ್ದ. ಆಗಲೇ ಜಾತ್ರೆಯುದ್ದಕ್ಕೂ ಹಾವಳಿಯಿಡುತ್ತಿದ್ದ ಐದಾರು ಯುವಕರ ಗುಂಪೊಂದು ಹುಡುಗನ ಸುತ್ತ ಜಮಾಯಿಸಿತು. ಅವರಲ್ಲೊಬ್ಬ ಬಾಲ್ ತೆಗೆದುಕೊಂಡು ಖರೀದಿಸುವವನಂತೆ ಪರೀಕ್ಷಿಸುತ್ತ ಬೆಲೆ ವಿಚಾರಿಸತೊಡಗಿದ. ಮುಂದಿನ ಕೆಲ ಕ್ಷಣಗಳಲ್ಲೇ ಬಾಲ್ ತೆಗೆದುಕೊಳ್ಳುವ ಕೈಗಳು ಎರಡರಿಂದ ನಾಲ್ಕಾದವು. ನಾಲ್ಕರಿಂದ ಎಂಟಾದವು. ನೋಡ ನೋಡುವಷ್ಟರಲ್ಲಿ ಹುಡುಗನ ಬಳಿ ಬೆರಳೆಣಿಕೆಯಷ್ಟು ಬಾಲ್ ಮಾತ್ರ ಉಳಿದವು. ಎರಡು ಬಾಲುಗಳನ್ನು ಮಾತ್ರ ಹಿಂದಿರುಗಿಸಿದ ಆ ಗುಂಪು ಜನಸಾಗರದ ನಡುವೆ ಕರಗಿಹೋಯಿತು. ಆ ಪುಂಡರ ಕೈ ಚಳಕ(?)ದ ಮುಂದೆ ಹುಡುಗನ ಹದ್ದಿನಕಣ್ಣುಗಳು ಸೋತವು. ' ಏ ಬಾಲ್ ದೇ ಭಾಯ್' ಎಂಬ ಹುಡುಗನ ಧ್ವನಿ ಜಾತ್ರೆಯ ಗೌಜಿನಲ್ಲಿ ಲೀನವಾಯಿತು.

ಷ್ಟು ದೊಡ್ಡ ಜನ ಜಾತ್ರೆಯಲ್ಲಿಯೂ ತನಗೆ ನೆರವಾಗಬಲ್ಲ ಜೀವವೊಂದು ಇರದಿದ್ದಕ್ಕೆ ಹುಡುಗನ ಹೃದಯ ಪ್ರವಾಹಕ್ಕೆ ಸಿಕ್ಕ ನಾವೆಯಂತೆ ತತ್ತರಿಸಿತು. ಸೋತ ಕಣ್ಣುಗಳಿಂದ ಹೊರಟ ಅಶ್ರುಧಾರೆಗಳು ಕೆನ್ನೆಯ ಗುಳಿಯಲ್ಲಿ ಇಂಗಿ ಇಲ್ಲವಾದವು.

ರುದಿನ: ಜಾತ್ರೆಯ ತೇರು, ಜೋರುಗಳೆಲ್ಲ ಮುಗಿದು ನೆರೆ ಇಳಿದ ನದಿಯಂತೆ ಸ್ತಬ್ಧವಾಗಿತ್ತು ಆ ಪ್ರದೇಶ. ಮುನ್ನಾದಿನ ಜನ ಪ್ರವಾಹವೆಸಗಿದ ಹಾನಿಯನ್ನೆಲ್ಲ ಬಳಿದು, ಆವರಣವನ್ನು 'ಸ್ವಚ್ಛ'ವಾಗಿಡುವ ಯತ್ನದಲ್ಲಿದ್ದರು ಪುರಸಭೆಯವರು. ಆ ಹುಡುಗನ ಜಾಗದಲ್ಲಿ ತರುಣನೊಬ್ಬ ನಿಂತು ಹೂವು ಮಾರುತ್ತಿದ್ದ.

ಫೋಟೊ ಕೃಪೆ: ಇಂಟರ್ನೆಟ್
ಮಂಗಳವಾರ, ಡಿಸೆಂಬರ್ 9, 2008

ಕ್ವಾಟ್ಲೆ ಕೊತ್ವಾಲ್ ಎಂಬ ಹೊಸ ರಾಗ

ಸುಮ್ಮನೆ ಹರಟೆ ಕೊಚ್ಚುತ್ತ ಕುಳಿತಾಗ ಹೊಕ್ಕ ಹುಳ ಈ ಕ್ವಾಟ್ಲೆ ಕೊತ್ವಾಲ್'. ಇದು ಕೇವಲ ಕ್ವಾಟ್ಲೆ(ತಮಾಷೆ)ಗಾಗಿ. ಇದರ ಹಿಂದೆ ಯಾರನ್ನೂ ಚುಚ್ಚುವ, ಅಪಹಾಸ್ಯ ಮಾಡುವ ಉದ್ದೇಶವಿಲ್ಲ.
ನಿಮಗೆ ಇಷ್ಟವಾಯಿತಾದರೆ ಕೊತ್ವಾಲ್ ಆಗಾಗ ಕಾಣಿಸಿಕೊಳ್ಳಲಿದ್ದಾನೆ.


ಪಾತ್ರ ಪರಿಚಯ: ಕೊತ್ವಾಲ್- ಒಬ್ಬ ಸುದ್ದಿ ಪ್ರಿಯ. ತನ್ನ ಶಿಷ್ಯನ ಮೂಲಕ ಊರ, ಪರಊರ ಸುದ್ದಿ ತಿಳಿಯುವುದು ಇವನ ಪ್ರಿಯವಾದ ಹವ್ಯಾಸ.
ಕಿಳ್ಳೇಕ್ಯಾತ:- ಕೊತ್ವಾಲನ ಶಿಷ್ಯ. ವಿಷಯ ಸಂಗ್ರಹಣೆಯಲ್ಲಿ ನಿಪುಣ.

ಯಾವತ್ತಿನಂತೆ ತನ್ನ ಆಸನದಲ್ಲಿ ವಿರಾಜಮಾನನಾದ ಕ್ವಾಟ್ಲೆ ಕ್ವತ್ವಾಲ್ ತನ್ನ ಶಿಷ್ಯ ಕಿಳ್ಳೇಕ್ಯಾತನ ಪ್ರತೀಕ್ಷೆಯಲ್ಲಿ ತೊಡಗಿದ. ಯಾವತ್ತೂ ತಾನು ಆಸೀನನಾಗುತ್ತಿದ್ದಂತೆ ಎದುರಿಗೆ ವಕ್ಕರಿಸುತ್ತಿದ್ದ ಶಿಷ್ಯೋತ್ತಮ ಇಂದು ಕಾಣದಿದ್ದಾಗ 'ಬಡ್ಡೇತದು ಊರ ಸುದ್ದಿ ತಿಳ್ಕಂಡು ಬಾರ್ಲಾ ಅಂತ ಕಳಿಸಿದ್ದರೆ ಎಲ್ಲಿ ಹಕ್ಕಲು ಪಟ್ಟಾಂಗ ಮಾಡುತ್ತ ಕುಳೀತಿದೆಯೋ' ಎಂದು ಗೊಣಗಿಕೊಂಡ.!
ಅಷ್ಟರಲ್ಲೇ "ಬಂದು ಬಾಳಾ ಹೊತ್ತಾತಾ ಗುರುಗ್ಳೇ...?" ಎನ್ನುತ್ತ ಕಿಳ್ಳೆಕ್ಯಾತ ಕೊತ್ವಾಲನ ಮುಂದೆ ಪ್ರತ್ಯಕ್ಷನಾದ.

ಎಲ್ಲಾ ಫಾರ್ಮಾಲಿಟೀಸ್ ಬದಿಗಿಟ್ಟು ಕೊತ್ವಾಲ ಕಿಳ್ಳೇಕ್ಯಾತನ ಬೀಟ್ ಡೈರಿಯ ಪರಿಶೀಲನೆಗೆ ಮುಂದಾದ.
"ಏನ್ಲಾ, ಪದ್ಮನಾಭ ಪುರದ ಪವರ್ ಹೌಸ್ ಕಡಿಗೆ ಹೋಗಿ "ದೊಡ್ಡವ್ರು" ಸೆಂದಾಕ್ಕವ್ರಾ ವಿಚಾರಿಸ್ಕಂಡ್ ಬಾ ಅಂದಿದ್ದೆ. ಹೋಗಿದ್ದೇನ್ಲಾ?"

ಕಿ.ಕ್ಯಾ. ತಕ್ಷಣವೇ ತನ್ನ ಬೀಟ್ ಪ್ರವರ ಒಪ್ಪಿಸತೊಡಗಿದ: "ಹೂಂ ಗುರುಗ್ಳೇ ಹೋಗಿದ್ದೆ. ಆದ್ರೆ ದೊಡ್ಡವ್ರು ಮನ್ಯಾಗೆ ಇರ್ನಿಲ್ಲ. ಅದೆ ಮೊನ್ನೆ ನಡೆದ ರಾಲಿನಾಗೆ ತುತ್ತೂರಿ ಊದಾವ ಅಂತ ಇದ್ದಬದ್ದ ಉಸರೆಲ್ಲಾ ಹಾಕಿ ಪುಸುಗುಟ್ಟಿದ್ರೂ ತುತ್ತೂರಿ ಸ್ವರ ಹೊರ್ಟಿರ್ಲಿಲ್ವಲ್ಲ , ಅದ್ಕೆ ಶಾನೆ ಬೇಜಾರ್ ಮಾಡ್ಕಂಡು ಯಾವ್ದಾರೂ ರಾಹು ಕೇತು ವಕ್ಕರಿಸಿಕೊಂಡವ್ರಾ? ಉಪ ಚುನಾವಣೇ ಬೇರೆ ಬಂತು. ಕೇಳ್ಕಂಬತ್ತೀನಿ ಅಂತ ದೇವರ ನಾಡು(God's Own country) ಕಡೆ ಹೋಗವ್ರಂತೆ. ವಾಪಸ್ ಬರಾದು ಮುಂದಿನ್ ಅಮಾಸೆ ಕಳೆದ ಮ್ಯಾಕಂತೆ.!"

"ಹೌದಾ? ನಮ್ ಸುಬ್ರಹ್ಮಣ್ಯಸ್ವಾಮಿಗಳಾದ್ರೂ ಸಿಕ್ಕಿದ್ರಾ?"
ಕಿ.ಕ್ಯಾ.:"ಸಿಕ್ಕಿದ್ರು. ಆದ್ರೆ ಅವರೂ ಡಲ್ಲಾಗಿದ್ರು. ಮಾತಾಡ ಮೂಡ್ನಾಗೆ ಇರ್ನಿಲ್ಲ.!"
"ಅದ್ಯಾಕ್ಲಾ? ಮೊನ್ನೆ ಗಂಟ ಗುಂಡ್ಕಲ್ ಇದ್ದಂಗೆ ಇದ್ರಲ್ಲ! ಈಗೇನಾತ್ಲಾ?"
" ಯಾವ್ದೊ ಭಾಸಣದಾಗೆ 'ನಾನು ಇನ್ಮುಂದೆ ಪಂಚೆ ಉಟ್ಕಂಡೇ ಓಡಾಡ್ತೀನಿ' ಅಂತ ಹೇಳಿದ್ದಕ್ಕೆ ಯಾರೋ ಕರೆಂಟ್ ಕೊಟ್ಟಂಗೆ ಕಮೆಂಟ್ ಮಾಡವ್ರಂತಲ್ಲಾ!?"
"ಯಾರ್ಲಾ ಅದು ಅಂಥಾ ಗಂಡು!?"
"ಅವರಾ ಹೆಸ್ರು "ಪುಟ್ಟ"ದಾಗಿದ್ರೂ ಕ್ಯಾರೆಕ್ಟರು ಫವರ್ಫುಲ್ ಆಗಿರೋ "ಅಣ್ಣಯ್ಯ" ಒಬ್ರು ಅವ್ರಂತಲ್ಲ! ಅವರೇ ಈ ಕ(ರೆ)ಮೆಂಟ್ ಕೊಟ್ಟೋರು. ಅವರು 'ಸ್ವಾಮಿಯವರು ನಿಜವಾದ ಮಣ್ಣಿನ ಮೊಮ್ಮಗನೇ ಆಗಿದ್ರೆ ಚಡ್ಡಿ ಹಾಕ್ಕಂಡು ತಿರುಗಾಡ್ಲಿ. ನಾನು ಒಪ್ಕತೀನಿ......' ಅಂತೆಲ್ಲಾ ಹೇಳಿದ್ರಂತೆ. ಅದ್ಕೆ ಇವ್ರು ವರ್ಸಾನುದಿನ ತೊಳೆಯದ ಪಂಚೆ ಥರ ಮುಖ ಮಾಡ್ಕಂಡು ಕುಂತ್ಕಂಡಿದ್ರು!"

"ಹೋಗ್ಲಿ. ನಮ್ಮ ಚಿಕ್ಕತಮ್ಮಯ್ಯ ಆದ್ರೂ ಸಿಕ್ಕುದ್ರಾ?"
"ಇಲ್ಲ.! ಅಣ್ಣ ಸ್ವಾಮಿ ಆ ಪರಿ ಬೇಜಾರು ಮಾಡ್ಕಂಡಿರಾದು ನೋಡಿ 'ಹೋಗ್ಲಿ ಅತ್ಲಾಗೆ ಒಂದು ಪಟ್ಟಾಪಟ್ಟಿ ಚಡ್ಡೀನಾರ ತಂದುಕೊಡಾವ ಅಂತ ಜವಳಿ ಸಾಪ್ ಕಡೆ ಹೋಗಿದ್ರಂತೆ.! ಅಣ್ಣದೇವರ ಸೈಜಿನ್ ಚಡ್ಡಿ ಎಲ್ಲೂ ಸಿಗಾಕಿಲ್ಲ ಅಂತಂದಾಗ ಯಾವದಾರ ಸಾಮಿಯಾನ ಕಂಪ್ನಿಗೆ ಹೋಗಿ ಒಂದಷ್ಟು ಬಟ್ಟೆ ತತ್ತೀನಿ. ಫ್ರೀ ಸೈಜಿಂದು ಹೊಲಿಸಿದ್ರಾತು ಅಂತ ಸಾಮಿಯಾನ ಫ್ಯಾಕ್ಟರಿ ಹುಡಿಕ್ಕಂಡು ಹೋಗವ್ರಂತೆ!"
"ಅಯ್ಯೋ ಪಾಪ..! ಇತ್ತಾಗೆ ನಮ್ಮ ಹೈಕೋರ್ಟ್ ಎದುರಿಂದ ಏನಾರ ಸುದ್ದಿ ಐತಾ?"
"ಇಸೇಸ ಸುದ್ದಿ ಏನಿಲ್ಲ. ಈ ತಿಂಗ್ಳ 13ಕ್ಕೆ ನಮ್ ಕಲಾಂ ಸಾರು ಏನೋ 'ಕ್ಲಾಸ್ ತಗತ್ತೀನಿ ರೆಡಿಯಾಗಿರಿ" ಅಂದವ್ರಂತಲ್ಲ. ಅದ್ಕೆ ತಯಾರಾಗೋದ್ರಾಗೆ ಬಿಜಿಯಾಗವ್ರೆ ಎಲ್ಲ.!"

"ಬೆಂದಕಾಳೂರಿಂದು ಈ ಕಥೆನಾ?" ಇನ್ನು ನಮ್ ಮಹಿಷಪುರ ಕತೆ ಏನಪ?"
"ಅಯ್ಯೋ ಇಲ್ಲಿದೇನು ಬುಡಿ ಸಿವಾ! ಉಸ್ತುವಾರಿ ನೋಡೋ 'ಅಕ್ಕೋರು' ದಸರಾನ 'ಶೋಭಾ'ಯಮಾನವಾಗಿ ಮಾಡಿ ಮುಗ್ಸುದ್ದು ನೋಡಿ 'ಅಪ್ಪೋರು' ದಿಲ್ ಕುಸ್ ಆಗವ್ರಂತೆ. ಅದ್ನ ಕಂಡು ಖುಸಿಯಾದ ಅಕ್ಕೋರು 'ಮುಂದಿನ ದಸರಾಗೆ ಈಗ್ಲಿಂದೆ ತಯಾರಿ ಸುರುಹಚ್ಕಳಿ' ಅಂತ ಅಧಿಕಾರಿಗುಳೀಗೆ ಏಳಿ ತಮ್ಮ ಗೂಟದ ಕಾರು ಹತ್ತಿ ಹೋದವ್ರು ಇನ್ನೂ ಇತ್ತಾ ಕಡೆ ಮುಖ ಮಾಡಿಲ್ವಂತೆ. ಇತ್ತಾಗೆ ರಂಗಾಯಣದಾಗೆ ಬಹುರೂಪಿ ನಾಟಕೋತ್ಸವ ಬಂತಲ್ಲ, ಅದ್ಕೆ ನಮ್ಮ ಖ್ಯಾ(ತೆ)ತ ಇಮರ್ಸಕರೆಲ್ಲ ಹೊಸ ಪೆನ್ನು ತಗಂಡು, ಜುಬ್ಬ ಪೈಜಾಮ ತೊಳ್ಕೊಂಡು, ಫ್ರೆಂಚ್ ಗಡ್ಡ ಟ್ರಿಮ್ ಮಾಡ್ಕಂಡು ತಯಾರಾಗ್ತವ್ರೆ! ಈ ಸರ್ತಿ 'ಬಹುರೂಪಿ'ಲಿ ಏನ್ ಕುರೂಪ ಹುಡುಕ್ಲಿ ಅಂತ ಕನ್ನಡ್ಕ ಒರೆಸ್ಕೊಂಡು ಕುಂತವ್ರೆ!"

"ಹೌದಾ. ಸರಿಕಣ್ ಬುಡು. ಬಹುರೂಪಿ ಟೇಮಿನಾಗೆ ಇತ್ಲಾಗೆ ಚೂರು ಗ್ಯಾನ ಮಡುಗು. ಬರೀ ಬೆಂದಕಾಳೂರ್ನಾಗೇ ಕಾಲ ಕಳಿತ ಕೂರ್ಬೇಡ" ಎಂದ ಕೊತ್ವಾಲ ಹೊರಡಲನುವಾದ.
ಅದನ್ನು ಕಂಡ ಕಿ.ಕ್ಯಾ. ಮಾಮೂಲಿಗಾಗಿ ಕೈಯೊಡ್ಡಿ ಹಲ್ಲುಗಿಂಜಿದ. "ಥೂ ಬಡ್ಡೇತದೆ. ಈ ಚಿಲ್ರೆ ಬುದ್ಧಿ ಬುಡಾಕಿಲ್ವಲ ನೀನು" ಎಂದು ಹತ್ತು ರೂನ ನೋಟನ್ನು ನೀಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಮಾಯವಾದ.

ಬುಧವಾರ, ಡಿಸೆಂಬರ್ 3, 2008

ಬ್ಲಾಗಿಗ 'ಹಳಿ' ತಪ್ಪಿದ ಕಥೆ

ತ ನನ್ನ ಮಿತ್ರರಲ್ಲೊಬ್ಬ. ಆಗಾಗ ಅಂತಜಾ೵ಲದಲ್ಲಿ ಬ್ಲಾಗ್ ಬರೆಯುವ ಕಾರಣ ಮಿತ್ರ ವಲಯದಲ್ಲಿ ಆತ 'ಬ್ಲಾಗಿಗ' ಎಂದೇ ಬಿರುದಾಂಕಿತ. ಆತನಿಗೊಮ್ಮೆ ಮೈಸೂರಿಗೆ ಬರುವ ಕೆಲಸವಿತ್ತು. ಅವನು ಆಗಷ್ಟೇ ಕೆಲಸಕ್ಕೆ ಸೇರಿದ್ದನಾದ್ದರಿಂದ ಜೇಬಿಗೂ ಸ್ವಲ್ಪ ಭಾರವಾಗದಿರಲೆಂದು ರೈಲಿಗೇ ಬರುವಂತೆ ಹೇಳಿ, ರೈಲುಗಳ ವೇಳಾಪಟ್ಟಿಯನ್ನೆಲ್ಲ ಎಸ್ಸೆಮ್ಮೆಸ್ ಕಳಿಸಿದ್ದೆ.

ರುದಿನ ಬೆಳಿಗ್ಗೆ 7.30ರ ರೈಲಿಗೆ ಹೊರಟಿದ್ದೇನೆಂದು ಆತ ಮೆಸೇಜ್ ಕಳುಹಿಸಿದ. ಹನ್ನೊಂದು ಗಂಟೆ ಸುಮಾರಿಗೆ ಬರಬಹುದೆಂದು ಆತನಿಗಾಗಿ ಕಾಯುತ್ತಿದ್ದೆ. ಅಷ್ಟರಲ್ಲೇ 'ಮೈಸೂರಿಗೆ ಬರುವಾಗ 'ಬಂಗಾರಪೇಟೆ' ಅಂತ ಊರು ಸಿಗುತ್ತಾ?' ಎಂಬ ಪ್ರಶ್ನೆ ಹೊತ್ತ ಆತನ ಎಸ್ಸೆಮ್ಮೆಸ್ ಬಂತು. ಮಹಾಶಯ ಹಳಿತಪ್ಪಿದ್ದಾನೆಂದು ತಕ್ಷಣ ಅರಿವಾಯಿತು. ರೈಲುಗಳ ಸಮಯವನ್ನು ಸರಿಯಾಗಿ ಕಳಿಸಿದ್ದರೂ ಟಿಕೆಟ್ ನೀಡುವಾತ ಹೇಳಿದ ಪ್ಲಾಟ್ ಫಾಮ್೵ ಸಂಖ್ಯೆಯನ್ನೇ ನೆಚ್ಚಿಕೊಂಡು ರೈಲಿನ ಬೋಡ್೵ ಕೂಡ ನೋಡದೆ ಹತ್ತಿ ಕುಳಿತಿದ್ದ ಪುಣ್ಯಾತ್ಮ!

ಒಂದೆಡೆ ಸೀಟು ಸಿಗುತ್ತಿದ್ದಂತೆ ಭೈರಪ್ಪನವರ 'ಅನ್ವೇಷಣ'ದಲ್ಲಿ ಮುಳುಗಿದ್ದವನಿಗೆ ಗಂಟೆ ಹನ್ನೊಂದಾದರೂ ರೈಲು ಮೈಸೂರು ತಲುಪದಿದ್ದಾಗ ತಟ್ಟನೆ ಜ್ಞಾನೋದಯ(!) ವಾಗಿ 'ರೈಲು ಎಲ್ಲೆಲ್ಲೋ ಹೋಗ್ತಿದೆ ಮಾರಾಯ!' ಎಂದು ಗೊಣಗಿಕೊಂಡು ಮತ್ತೊಂದು ಮೆಸೇಜ್ ಬಿಟ್ಟ. ಎಲ್ಲೋ ಎಸೆದಿದ್ದ ರೈಲು ವೇಳಾಪಟ್ಟಿಯನ್ನು ಪುನಃ ಹುಡುಕಿ ಮೆಸೇಜ್ ಕಳೀಸಬೇಕಾದ ಕಮ೵ ನನ್ನದಾಯಿತು. ಅದೇ ಸಮಯಕ್ಕೆ ಅವನ ಮೊಬೈಲ್ ಕರೆನ್ಸಿಯೂ ಖಾಲಿಯಾಗಿದ್ದರಿಂದ ಅದರ ರಿಚಾಜ್೵ ಹೊಣೆಯೂ ನನ್ನ ಹೆಗಲಿಗೇ ಬಿತ್ತು!

ತ ಬಂಗಾರಪೇಟೆಯಿಂದ ಬೆಂಗಳೂರಿಗೆ ಮರಳಿ ಬಂದು ಮೈಸೂರಿನ ರೈಲು ಹತ್ತುವವರೆಗೂ ಜೀವ ಎಡಗೈಲಿ ಹಿಡಿದುಕೊಂಡಂತಾಗಿತ್ತು ನನ್ನ ಸ್ಥಿತಿ. ಪ್ರಯಾಣದುದ್ದಕ್ಕೂ ಭೂಪ ಗಡದ್ದಾಗಿ ನಿದ್ದೆ ತೆಗೆಯುತ್ತಿದ್ದರೆ, ಪುಕ್ಕಟೆ ಪರೋಪಕಾರಿಯಾಗಲು ಹೊರಟ ನಾನು ಆತ ಮತ್ತೆಲ್ಲೋ ಕಾಣೆಯಾದರೆ ಗತಿಯೇನೆಂಬ ಆತಂಕದಲ್ಲಿದ್ದೆ. (ಅವ ಅಪ್ಪ-ಅಮ್ಮರಿಗೆ ಒಬ್ಬನೇ ಮಗ ಬೇರೆ!)

ಷ್ಟೆಲ್ಲ ಆಗುವಷ್ಟರಲ್ಲಿ ಈತ ಹಳಿ ತಪ್ಪಿದ ಸುದ್ದಿ ಅವನ ಸಹೋದ್ಯೋಗಿಯೊಬ್ಬರಿಗೆ ಗೊತ್ತಾಗಿ ವೃತ್ತಿಬಾಂಧವರ ನಡುವೆಯೆಲ್ಲಾ ಅದು ಪ್ರಚಾರವಾಗಿಬಿಟ್ಟಿತ್ತು. ಅವರೆಲ್ಲ ಫೋನಿನಲ್ಲೇ ಇವನನ್ನು ಒಂದು ಸುತ್ತು ಕಿಚಾಯಿಸಿ ಮಜ ತೆಗೆದುಕೊಂಡಿದ್ದರು. ರೈಲನ್ನೂ , ವೃತ್ತಿಬಾಂಧವರನ್ನೂ ದೂವಾ೵ಸ ಮುನಿಯಂತೆ ಶಪಿಸುತ್ತ ಸಂಜೆ ವೇಳೆಗೆ ಮಿತ್ರ ಮೈಸೂರು ತಲುಪಿದ. ಈ ನಡುವೆ ಆ ಮಹಾಶಯನನ್ನು ಹಳಿ ಹತ್ತಿಸುವಷ್ಟರಲ್ಲಿ ನಾನು ಹೈರಾಣಾದದ್ದು ಮಾತ್ರ ಯಾರ ಗಮನಕ್ಕೂ ಬರಲಿಲ್ಲ!