ಬುಧವಾರ, ಡಿಸೆಂಬರ್ 3, 2008

ಬ್ಲಾಗಿಗ 'ಹಳಿ' ತಪ್ಪಿದ ಕಥೆ

ತ ನನ್ನ ಮಿತ್ರರಲ್ಲೊಬ್ಬ. ಆಗಾಗ ಅಂತಜಾ೵ಲದಲ್ಲಿ ಬ್ಲಾಗ್ ಬರೆಯುವ ಕಾರಣ ಮಿತ್ರ ವಲಯದಲ್ಲಿ ಆತ 'ಬ್ಲಾಗಿಗ' ಎಂದೇ ಬಿರುದಾಂಕಿತ. ಆತನಿಗೊಮ್ಮೆ ಮೈಸೂರಿಗೆ ಬರುವ ಕೆಲಸವಿತ್ತು. ಅವನು ಆಗಷ್ಟೇ ಕೆಲಸಕ್ಕೆ ಸೇರಿದ್ದನಾದ್ದರಿಂದ ಜೇಬಿಗೂ ಸ್ವಲ್ಪ ಭಾರವಾಗದಿರಲೆಂದು ರೈಲಿಗೇ ಬರುವಂತೆ ಹೇಳಿ, ರೈಲುಗಳ ವೇಳಾಪಟ್ಟಿಯನ್ನೆಲ್ಲ ಎಸ್ಸೆಮ್ಮೆಸ್ ಕಳಿಸಿದ್ದೆ.

ರುದಿನ ಬೆಳಿಗ್ಗೆ 7.30ರ ರೈಲಿಗೆ ಹೊರಟಿದ್ದೇನೆಂದು ಆತ ಮೆಸೇಜ್ ಕಳುಹಿಸಿದ. ಹನ್ನೊಂದು ಗಂಟೆ ಸುಮಾರಿಗೆ ಬರಬಹುದೆಂದು ಆತನಿಗಾಗಿ ಕಾಯುತ್ತಿದ್ದೆ. ಅಷ್ಟರಲ್ಲೇ 'ಮೈಸೂರಿಗೆ ಬರುವಾಗ 'ಬಂಗಾರಪೇಟೆ' ಅಂತ ಊರು ಸಿಗುತ್ತಾ?' ಎಂಬ ಪ್ರಶ್ನೆ ಹೊತ್ತ ಆತನ ಎಸ್ಸೆಮ್ಮೆಸ್ ಬಂತು. ಮಹಾಶಯ ಹಳಿತಪ್ಪಿದ್ದಾನೆಂದು ತಕ್ಷಣ ಅರಿವಾಯಿತು. ರೈಲುಗಳ ಸಮಯವನ್ನು ಸರಿಯಾಗಿ ಕಳಿಸಿದ್ದರೂ ಟಿಕೆಟ್ ನೀಡುವಾತ ಹೇಳಿದ ಪ್ಲಾಟ್ ಫಾಮ್೵ ಸಂಖ್ಯೆಯನ್ನೇ ನೆಚ್ಚಿಕೊಂಡು ರೈಲಿನ ಬೋಡ್೵ ಕೂಡ ನೋಡದೆ ಹತ್ತಿ ಕುಳಿತಿದ್ದ ಪುಣ್ಯಾತ್ಮ!

ಒಂದೆಡೆ ಸೀಟು ಸಿಗುತ್ತಿದ್ದಂತೆ ಭೈರಪ್ಪನವರ 'ಅನ್ವೇಷಣ'ದಲ್ಲಿ ಮುಳುಗಿದ್ದವನಿಗೆ ಗಂಟೆ ಹನ್ನೊಂದಾದರೂ ರೈಲು ಮೈಸೂರು ತಲುಪದಿದ್ದಾಗ ತಟ್ಟನೆ ಜ್ಞಾನೋದಯ(!) ವಾಗಿ 'ರೈಲು ಎಲ್ಲೆಲ್ಲೋ ಹೋಗ್ತಿದೆ ಮಾರಾಯ!' ಎಂದು ಗೊಣಗಿಕೊಂಡು ಮತ್ತೊಂದು ಮೆಸೇಜ್ ಬಿಟ್ಟ. ಎಲ್ಲೋ ಎಸೆದಿದ್ದ ರೈಲು ವೇಳಾಪಟ್ಟಿಯನ್ನು ಪುನಃ ಹುಡುಕಿ ಮೆಸೇಜ್ ಕಳೀಸಬೇಕಾದ ಕಮ೵ ನನ್ನದಾಯಿತು. ಅದೇ ಸಮಯಕ್ಕೆ ಅವನ ಮೊಬೈಲ್ ಕರೆನ್ಸಿಯೂ ಖಾಲಿಯಾಗಿದ್ದರಿಂದ ಅದರ ರಿಚಾಜ್೵ ಹೊಣೆಯೂ ನನ್ನ ಹೆಗಲಿಗೇ ಬಿತ್ತು!

ತ ಬಂಗಾರಪೇಟೆಯಿಂದ ಬೆಂಗಳೂರಿಗೆ ಮರಳಿ ಬಂದು ಮೈಸೂರಿನ ರೈಲು ಹತ್ತುವವರೆಗೂ ಜೀವ ಎಡಗೈಲಿ ಹಿಡಿದುಕೊಂಡಂತಾಗಿತ್ತು ನನ್ನ ಸ್ಥಿತಿ. ಪ್ರಯಾಣದುದ್ದಕ್ಕೂ ಭೂಪ ಗಡದ್ದಾಗಿ ನಿದ್ದೆ ತೆಗೆಯುತ್ತಿದ್ದರೆ, ಪುಕ್ಕಟೆ ಪರೋಪಕಾರಿಯಾಗಲು ಹೊರಟ ನಾನು ಆತ ಮತ್ತೆಲ್ಲೋ ಕಾಣೆಯಾದರೆ ಗತಿಯೇನೆಂಬ ಆತಂಕದಲ್ಲಿದ್ದೆ. (ಅವ ಅಪ್ಪ-ಅಮ್ಮರಿಗೆ ಒಬ್ಬನೇ ಮಗ ಬೇರೆ!)

ಷ್ಟೆಲ್ಲ ಆಗುವಷ್ಟರಲ್ಲಿ ಈತ ಹಳಿ ತಪ್ಪಿದ ಸುದ್ದಿ ಅವನ ಸಹೋದ್ಯೋಗಿಯೊಬ್ಬರಿಗೆ ಗೊತ್ತಾಗಿ ವೃತ್ತಿಬಾಂಧವರ ನಡುವೆಯೆಲ್ಲಾ ಅದು ಪ್ರಚಾರವಾಗಿಬಿಟ್ಟಿತ್ತು. ಅವರೆಲ್ಲ ಫೋನಿನಲ್ಲೇ ಇವನನ್ನು ಒಂದು ಸುತ್ತು ಕಿಚಾಯಿಸಿ ಮಜ ತೆಗೆದುಕೊಂಡಿದ್ದರು. ರೈಲನ್ನೂ , ವೃತ್ತಿಬಾಂಧವರನ್ನೂ ದೂವಾ೵ಸ ಮುನಿಯಂತೆ ಶಪಿಸುತ್ತ ಸಂಜೆ ವೇಳೆಗೆ ಮಿತ್ರ ಮೈಸೂರು ತಲುಪಿದ. ಈ ನಡುವೆ ಆ ಮಹಾಶಯನನ್ನು ಹಳಿ ಹತ್ತಿಸುವಷ್ಟರಲ್ಲಿ ನಾನು ಹೈರಾಣಾದದ್ದು ಮಾತ್ರ ಯಾರ ಗಮನಕ್ಕೂ ಬರಲಿಲ್ಲ!

8 ಕಾಮೆಂಟ್‌ಗಳು:

ಚಿತ್ರಾ ಸಂತೋಷ್ ಹೇಳಿದರು...

ಕೊನೆಗೆ ಯಾರ ಜೇಬಿಗೆ ಭಾರ ಆಗಿದ್ದು?! ಹಿಹಿಹಿ
-ಚಿತ್ರಾ

ರಾಘವೇಂದ್ರ ಕೆಸವಿನಮನೆ. ಹೇಳಿದರು...

ನನ್ನ ಜೇಬಿಗಂತೂ ಅಲ್ಲ.....!ಅವ ಮೈಸೂರಿಗೆ ಬಂದೊಡನೆಯೇ ರೀಚಾಜ್೵ ಹಣ ವಸೂಲು ಮಾಡಿದೆ..!
ಅವನಿಗೂ ಆಗಿರಲಿಕ್ಕಿಲ್ಲ..!ಪುಕ್ಕಟೆ ಮೈಸೂರು ಟಿಕೆಟಿನಲ್ಲಿ ಬಂಗಾರಪೇಟೆಗೆ ಹೋಗಿ ಮತ್ತೆ ಮೈಸೂರಿಗೆ ಬರುವ ಅವಕಾಶ ಎಲ್ಲರಿಗೂ ಸಿಗುತ್ತಾ...!!!?

Harisha - ಹರೀಶ ಹೇಳಿದರು...

ನಾವೂ ಹೀಗೆ ಒಂದು ಸಾರಿ ಹಳಿ ತಪ್ಪಿದ್ದೆವು.. ಸಮಯವಿದ್ದಾಗ ಇದನ್ನು ಓದಿ..

Ittigecement ಹೇಳಿದರು...

ರಾಘವೇಂದ್ರ....
ಇಂತಹ ಪ್ರಕರಣ ನನಗೂ ಆಗಿದೆ...
ನಿದ್ದೆ ಮಾಡಿದ್ದಲ್ಲದೆ.. ಕಿಸೆಯಲ್ಲಿ ಹಣ ಇಟ್ಕೋಳ್ಳೋದು ಮರೆತು ಬಿಟ್ಟಿದ್ದೆ..!!
ಚಂದವಾಗಿ ಬರೆದಿದ್ದೀರಿ...

shivu.k ಹೇಳಿದರು...

ರಾಘವೇಂದ್ರ,
ನಿಮ್ಮ ಮೈಸೂರಿಗೆ ಹೋಗುವಾಗ ಹೊಸಬರಿಗೆ ಬೆಂಗಳೂರಿನಲ್ಲಿ ಹಳಿ ತಪ್ಪುವುದು ಗ್ಯಾರಂಟಿ ಕೆಲವರು ಕುಂಬಕೊಣಂವರೆಗೂ ಹೋಗಿದ್ದುಂಟು. ನಿಮ್ಮ ಗೆಳೆಯ ವಾಸಿ !

ರಾಘವೇಂದ್ರ ಕೆಸವಿನಮನೆ. ಹೇಳಿದರು...

@ Harish - ಹರೀಶ,
ಓದಿದೆ!!! :):)

@ಸಿಮೆಂಟು ಮರಳಿನ ಮಧ್ಯೆ,
ಸಧ್ಯ ಬಚಾವು.! ಈ ಪುಣ್ಯಾತ್ಮ ಹಂಗೊಂದು ಮಾಡಲ್ಲೆ!!:)

@ ಶಿವು.,
:):)ನೀವು ಈ ತಿಂಗಳ 26ಕ್ಕೆ ಮೈಸೂರಿಗೆ ಬರುತ್ತೀರಾ!? ಬರೊದಾದರೆ ನನ್ನ ನಂಬರ್ ಕೊಡ್ತೇನೆ! ಎಲ್ಲಾದ್ರೂ ಹಳಿ ತಪ್ಪಿದರೆ ಹಳಿ ಹತ್ತಿಸಬೇಕಲ್ಲ ....:):)
ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು.
-ರಾಘವೇಂದ್ರ ಕೆಸವಿನಮನೆ.

shivu.k ಹೇಳಿದರು...

ರಾಘವೇಂದ್ರ,
ಈ ತಿಂಗಳ ೨೬ಕ್ಕೆ ಖಂಡಿತ ಮೈಸೂರಿಗೆ ಬರುತ್ತೇನೆ. ಅಲ್ಲಿ ಮೊದಲನೆ ಬಹುಮಾನದ ಜೊತೆ ೩೦೦೦ ಸಾವಿರ ಕ್ಯಾಶ್ ಪ್ರೈಜು ಉಂಟು ಹೋಗಿ ಹೋಗಿ ನನ್ನ ಕೈಯಾರೆ ತೆಗೆದುಕೊಳ್ಳಬೇಕು. ಹೋಗದಿದ್ದಲ್ಲಿ ಹಣ ನನ್ನ ಕೈ ತಪ್ಪುವ ಭಯವಿದೆ ! ನಿಮ್ಮ ನಂಬರ್ ಕೊಡಿ.
ಅಂದಹಾಗೆ ನನಗೆ ಹಳಿ ತಪ್ಪಿಸುವ ಭಯವಿಲ್ಲ. ಏಕೆಂದರೆ ನನಗೆ ಮೈಸೂರು ಪಕ್ಕದ ಮನೆಯಂತೆ ಮತ್ತು ಅಲ್ಲಿ ಫೋಟೋಗ್ರಫಿ ಗೆಳೆಯರು ನನಗೆ ತುಂಬಾ ಉಂಟು ಮತ್ತೊಂದು ವಿಚಾರವೇನೆಂದರೆ ನನಗೆ ಮೈಸೂರಿಗೆ ಹೋಗುವ ರೈಲುಗಳು, ಅವುಗಳ ಸಮಯ ಮತ್ತು ಖಚಿತ ಪ್ಲಾಟ್‌ಫಾರಂಗಳು ನನ್ನ ನೆನಪಿನ ಶಕ್ತಿಯಲ್ಲಿ ಸಂಪೂರ್ಣ ಅಚ್ಚಾಗಿದೆ. ಮಲ್ಲಿಕಾರ್ಜುನ್ ನನ್ನ ಜೊತೆ ಬರುತ್ತಾರೆ. ಆಹಾಂ! ಚಿತ್ರಾ ಕೂಡ ಬರುತ್ತೇನೆ ಅಂದಿದ್ದಾಳೆ. ನೋಡೋಣ. ಅಲ್ಲಿ ಬೇಟಿಯಾಗೋಣ.

ವಿ.ರಾ.ಹೆ. ಹೇಳಿದರು...

ಹ್ಹ ಹ್ಹ ಆ ಹಳಿ ತಪ್ಪಿದ ಬ್ಲಾಗಿಗ ನಿಮ್ಮ ಗೆಳೆಯನೋ! ಅವ ಯಾವಾಗಲೂ ಹಳಿ ತಪ್ಪಿಸುವವನು. ಒಂದು ಸಾರಿ ತಾನೇ ಹಳಿ ತಪ್ಪಿಬಿಟ್ಟಿದ್ದಾನೆ.!