ಮಂಗಳವಾರ, ಸೆಪ್ಟೆಂಬರ್ 16, 2008

ಬ್ಲಾಗಿನೊಳು ಬಂದಿಹೆನು ಕೈ ಮುಗಿದು ನಿಂದಿಹೆನು

ಪ್ರಿಯ ಓದುಗರೇ ಮತ್ತು ಬ್ಲಾಗಿಗರೇ,


ಈವರೆಗೆ ವಿವಿಧ ನಲ್ದಾಣಗಳನ್ನು ಹೊಕ್ಕು ಬರಹಗಳ ಸವಿಯನ್ನು ಸವಿಯುತ್ತಿದ್ದ ನಾನು ಇಂದು ಈ ಬ್ಲಾಗೆಂಬ ಮಹಾಮನೆಗೆ ಹೊಸ ಸದಸ್ಯನಾಗಿ ಸೇರ್ಪಡೆಗೊಂಡಿದ್ದೇನೆ.
ಮನಸ್ಸೆಂಬ ಮಹಾ ಸಾಗರದಲ್ಲೇಳುವ ಉನ್ಮತ್ತ ಅಲೆಗಳನ್ನು ತಣಿಸಿ ಮಣಿಸಲು ನಾನು ಕಂಡುಕೊಂಡಿರುವ ಮಾರ್ಗ ಬರವಣಿಗೆ. ಹಾಗೆಂದು ನಾನು ಭಯಂಕರ ಬರಹಗಾರನೇನಲ್ಲ! ಎಲ್ಲೋ ಆಗೀಗ ತೋಚಿದ್ದನ್ನೇ ಗೀಚುವ ಹವ್ಯಾಸವಿದೆ. ಕೆಲ ಸಮಯ ಮಾಸಪತ್ರಿಕೆಯೊಂದರಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ್ದರಿಂದ ನನ್ನ ಓತಪ್ರೋತವಾದ ಬರವಣಿಗೆಗೆ ಒಂದು ಚೌಕಟ್ಟು ಸಿಕ್ಕಿದೆ.
‘ನಡೆವವರೆಡವದೆ ಕುಳಿತವರೆಡಹುವರೆ?’ ಎಂಬ ಮಾತಿನಲ್ಲಿ ನಂಬಿಕೆ ನನಗೆ. ಕುಳಿತು ಕೊಳೆಯುವುದಕ್ಕಿಂತ ಎಡವಿದರೂ ಎದ್ದು ನಡೆಯುತ್ತಿದ್ದರೆ ಇಂದಲ್ಲ ನಾಳೆ ಯಾವುದೋ ಗಮ್ಯವನ್ನಂತೂ ತಲುಪುತ್ತೇವೆ ಅಲ್ವಾ? ಹಾಗೆಂದುಕೊಂಡೇ “ಇಂಚರ”ದ ಮೂಲಕ ಹೊಸ ನಡಿಗೆಯೊಂದನ್ನು ಪ್ರಾರಂಭಿಸಿದ್ದೇನೆ. ಇಂಚರದ ಶ್ರುತಿ ಲಯ ತಾಳಗಳಲ್ಲಿ ವ್ಯತ್ಯಾಸವಾದರೆ ಸರಿಪಡಿಸಲು ಹಿರಿಯರೂ ಘಟಾನುಘಟಿಗಳೂ ಆದ ನೀವೆಲ್ಲಾ ಇದ್ದೀರಿ! ‘ಇವನಾರವ, ಇವನೆಷ್ಟರವ’ ಎಂದೆಣಿಸದೆ ‘ಇವ ನಮ್ಮವ, ಇವ ನಮ್ಮವ ಎಂದೆಣಿಸಿ ಸಲಹೆ, ಸಹಕಾರ ನೀಡಬೇಕೆಂದು ಕೇಳುತ್ತಾ ಭಾವ ನಾವೆಯಲಿ ದೂರ ತೀರದ ಯಾನವನ್ನು ಆರಂಭಿಸುತ್ತಿದ್ದೇನೆ. ನಿಮ್ಮೆಲ್ಲರ ಶುಭ ಹಾರೈಕೆ ಇರಲಿ.

ನಿಮ್ಮವ,
ರಾಘವೇಂದ್ರ ಕೆಸವಿನಮನೆ.

4 ಕಾಮೆಂಟ್‌ಗಳು:

shivu.k ಹೇಳಿದರು...

ರಾಘವೇಂದ್ರರವರೆ ನಿಮಗೆ ಈ ಬ್ಲಾಗ್ ಲೋಕಕ್ಕೆ ಸ್ವಾಗತ.
ನಾನು ನಿಮ್ಮಂತೆ ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನನ್ನದು ಫೋಟೊಗ್ರಫಿ ಪ್ರಪಂಚ. ನೀವು ನನ್ನ ಬ್ಲಾಗಿನೊಳಗೆ ಕಾಲಿಟ್ಟರೇ ಅಲ್ಲಿ ನಿಮಗಿಷ್ಟವಾದ ಛಾಯಾಚಿತ್ರಗಳು ಅದರ ಕುರಿತಾದ ಲೇಖನಗಳು ಸಿಗಬಹುದು. ಬನ್ನಿ.

ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com/
ಹೊಸ ರೀತಿಯ ವಿಚಾರದ ಬರವಣಿಗೆಯ ನನ್ನ ಬ್ಲಾಗಿ ವಿಳಾಸ:
http://camerahindhe.blogspot.com/
ದ್ರ ನಿಮಗೆ ಬ್ಲಾಗ್ ಲೋಕಕ್ಕೆ ಸ್ವಾಗತ.

ರಾಘವೇಂದ್ರ ಕೆಸವಿನಮನೆ. ಹೇಳಿದರು...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಖಂಡಿತ ನಿಮ್ಮ ಬ್ಲಾಗಿಗೆ ಭೇಟಿ ನೀಡುತ್ತೇನೆ.

muddu ಹೇಳಿದರು...

chennagi barediddira raghvendra avare......

Harisha - ಹರೀಶ ಹೇಳಿದರು...

ರಾಘವೇಂದ್ರ ಅವರೇ, ಬ್ಲಾಗಂಗಳಕ್ಕೆ ಸ್ವಾಗತ :-)